ಪ್ರಶ್ನೆಗಳು ಮತ್ತು ಉತ್ತರ
ಪ್ರಶ್ನೆಗಳು ಮತ್ತು ಉತ್ತರ .
-
ಪಶುಸಂತೆ.ಕಾಮ್ ಎಂದರೇನು?
ಪಶುಸಂತೆ.ಕಾಮ್ , ಇದು ರೈತರು ಹಸು, ಎಮ್ಮೆ, ಎತ್ತು, ಕುರಿ , ಮೇಕೆ ಇತ್ಯಾದಿ ಜಾನುವಾರುಗಳನ್ನು ಮಾರಾಟ ಮಾಡಲು ಹಾಗೂ ಖರೀದಿದಾರರು ಜಾನುವಾರುಗಳನ್ನು ಖರೀದಿ ಮಾಡಲು ಉಪಯುಕ್ತವಾಗುವ ಒಂದು ಡಿಜಿಟಲ್ ತಂತ್ರಜ್ಞಾನ ವೇದಿಕೆಯಾಗಿರುತ್ತದೆ.
-
ಇದು ಉಚಿತವೇ? ಅಥವಾ ಶುಲ್ಕ ಪಾವತಿ ಮಾಡಬೇಕೆ?
ಇದು ಪ್ರಾರಂಭದಲ್ಲಿ ಉಚಿತವಾಗಿರುತ್ತದೆ, ಒಬ್ಬ ರೈತನ ಅನೇಕ ಜಾನುವಾರುಗಳು ಈ ವೆಬ್ ಸೈಟ್ ಮುಖಾಂತರ ಯಶ್ವಸಿಯಾಗಿ ಮಾರಾಟ ವಾದಲ್ಲಿ ಮಾತ್ರ ಮುಂದಿನ ದಿನಗಳಲ್ಲಿ ಅಗತ್ಯವಿದ್ದಲ್ಲಿ ಮಾತ್ರ ಸಣ್ಣ ಪ್ರಮಾಣದ ಶುಲ್ಕ ಪಾವತಿಸಿ ಜಾನುವಾರಗಳ ವಿವರ ಮತ್ತು ಫೋಟೋ ಹಾಕಲು ಅವಕಾಶವಿರುತ್ತದೆ.
-
ಮಾರಾಟ ಮಾಡುವುದು ಹೇಗೆ?
ಪಶುಸಂತೆ.ಕಾಮ್ ವೆಬ್ ಸೈಟ್ ನಲ್ಲಿ ಜಾನುವಾರು ಮಾರಾಟ ಮಾಡಲು ಅವಕಾಶ ಮಾಡಲಾಗಿದೆ. ಮಾರಾಟ ಮಾಡಲು ಆಸಕ್ತರಿರುವ ಮಾಲೀಕರು ಜಾನುವಾರುಗಳ ತಳಿ,ವಯಸ್ಸು,ಜಾನುವರ್ ಇರುವ ಜಿಲ್ಲೆ, ತಾಲೂಕು , ಮಾರಾಟಗಾರನ ದೂರವಾಣಿ ಸಂಖ್ಯೆ, ಇನ್ನಿತರ ವಿವರಗಳನ್ನು ತುಂಬಿ , ಫೋಟೋ ಸೇರಿಸಿ ಜಾಲತಾಣದಲ್ಲಿ ತುಂಬಬೇಕು
-
ಖರೀದಿ ಮಾಡುವುದು ಹೇಗೆ?
ಪಶುಸಂತೆ.ಕಾಮ್ ಅಂತರ್ಜಾಲ (ವೆಬ್ ಸೈಟ್) ದಲ್ಲಿ ಖರೀದಿದಾರರು ಅವರಿಗೆ ಅಗತ್ಯ ವಿರುವ ಜಾನುವಾರುಗಳನ್ನು , ಜಿಲ್ಲೆ / ತಾಲೂಕ್/ ಗ್ರಾಮ/ಜಾನುವಾರು ತಳಿ / ಮಾರಾಟ ದರ ಹುಡುಕಿ,ಮಾರಾಟದಾರರ ನೇರ ದೂರವಾಣಸಂಖ್ಯೆಯನ್ನು ಪಡೆದು , ಕರೆ ಮಾಡಿ ಮುಂದೆ ವ್ಯವಹರಿಸ ಬಹುದಾಗಿರುತ್ತದೆ.
-
ಈ ವೆಬ್ ಸೈಟ್ ನಲ್ಲಿ ಹಾಕಿರುವ ಮಾಹಿತಿ /ವಿವರ ಸರಿ ಇದೆಯೇ?
ಜಾನುವಾರು ಮಾರಾಟ ಮಾಡಲು ಇಚ್ಚಿಸುವ ರೈತ ತನ್ನ ಜಾನುವಾರುವಿನ ಫೋಟೋದ ಜೊತೆಗೆ ವಿವರವನ್ನು ನೀಡಿರುತ್ತಾರೆ ಹಾಗೂ ಮಾಲಿಕರ ದೂರವಾಣಿ ಸಂಖ್ಯೆ ನೇರವಾಗಿ ದೊರಕುವುದರಿಂದ ಖರೀದುದಾರರು ಹೆಚ್ಚಿನ ವಿವರಗಳನ್ನು ಪಡೆದ ನಂತರವೇ ವ್ಯವಹರಿಸಬಹುದಾಗಿರುತ್ತದೆ.
-
ಫೋಟೋ ಮತ್ತು ವಿವರ ನೋಡಿ ಜಾನುವಾರುಗಳನ್ನು ಖರೀದಿ ಮಾಡುವುದು ತೃಪ್ತಿ ತರುತ್ತದೆಯೇ ?
ಇಲ್ಲಿ ಫೋಟೋ ಮತ್ತು ವಿವರ ನೋಡಿ ಜಾನುವಾರುಗಳನ್ನು ಖರೀದಿ ಮಾಡುವುದು ಮಾತ್ರ ಅಲ್ಲ , ಜಾನುವಾರು ಮಾರಾಟ ಮಾಡಲು ಇಚ್ಚಿಸುವ ರೈತರೂ ತನ್ನ ಜಾನುವಾರುವಿನ ಫೋಟೋದ ಜೊತೆಗೆ ವಿವರವನ್ನು ನೀಡಿರುತ್ತಾರೆ ಮತ್ತು ಮಾಲಿಕರ ದೂರವಾಣಿ ಸಂಖ್ಯೆ ನೇರವಾಗಿ ದೊರಕುವುದರಿಂದ ಖರೀದಿದಾರರು ಹೆಚ್ಚಿನ ವಿವರಗನ್ನು ಪಡೆದ ನಂತರವೇ ವ್ಯವಹರಿಸಬಹುದಾಗಿರುತ್ತದೆ.
-
ಇದು ರೈತರಿಗೆ ಮತ್ತು ಖರೀದಿದಾರರಿಗೆ ಹೇಗೆ ಪ್ರಯೋಜನವಾಗುತ್ತದೆ?
ರೈತರಿಗೆ ಮತ್ತು ಖರೀದಿದಾರರಿಗೆ ಮಧ್ಯವರ್ತಿಗಳಿಂದ ಮುಕ್ತವಾಗಿ ನೇರ ಮಾರಾಟಗಾರ ಅಥವಾ ಖರೀದಿದಾರರೊಂದಿಗೆ ವ್ಯವಹರಿಸುವ ಸುಲಭ ಮಾರ್ಗ. ಜಾನುವಾರುಗಳನ್ನು ಮಾರುಕಟ್ಟೆಗೆ ಕೊಂಡೊಯ್ಯುವ ಖರ್ಚು , ಸಮಯ ಉಳಿತಾಯ ಮಾಡಬಹುದಾಗಿರುತ್ತದೆ.
-
ಮಾಹಿತಿ ಬೇಕಾದಲ್ಲಿ ಯಾರನ್ನು ಸಂಪರ್ಕಿಸಬೇಕು?
ವೆಬ್ ಸೈಟ್ ನ ಬಗ್ಗೆ ಮಾಹಿತಿ ಬೇಕಾದಲ್ಲಿ +91 6362459748, email id pashusanthe@gmail.com ಸಂಪರ್ಕಿಸಬಹುದು.
-
ಜಾನುವಾರು ಮಾರಾಟವಾದ ನಂತರ ವೆಬ್ ಸೈಟ್ ನಿಂದ ತೆಗೆದು ಹಾಕುವುದು ಹೇಗೆ?
ಪಶುಸಂತೆ.ಕಂ ವೆಬ್ ಸೈಟ್ ನಲ್ಲಿ ಲಾಗ್ ಇನ್ ಆಯ್ಕೆ ಮಾಡಿ , ನಿಮ್ಮ ಮೊಬೈಲ್ ಸಂಖ್ಯೆ ನಮೂದಿಸಿ, ನಿಮ್ಮ ಮೊಬೈಲ್ ಸಂಖ್ಯೆಗೆ ಬರುವ ಒಟಿಪಿ ಯನ್ನು ನಮೂದಿಸಿ.ಲಿಸ್ಟಿಂಗ್ ಆಯ್ಕೆಯಲ್ಲಿ ಮಾರಾಟ ಆಗಿರುವ ಜಾನುವಾರುವನ್ನು ಡಿಲೀಟ್ ಆಯ್ಕೆ ಮಾಡಿ ವೆಬ್ ಸೈಟ್ ನಿಂದ ತೆಗೆದು ಹಾಕಬಹುದು.