ನಮ್ಮನ್ನು ಕುರಿತು

Our Company
ಪಶುಸಂತೆ .ಕಾಮ್ ಬಗ್ಗೆ:

ಪಶುಸಂತೆ .ಕಾಮ್ ವೆಬ್ ಸೈಟ್ ಜಾನುವಾರುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಆನ್‌ಲೈನ್ ಮಾರುಕಟ್ಟೆಯಾಗಿದೆ. ಇದು ರೈತರು, ಜಾನುವಾರು ಉದ್ಯಮಗಳು, ಸ್ವಯಂ ಉದ್ಯೋಗಿಗಳು, ಯಾವುದೇ ವ್ಯಕ್ತಿ ತಮ್ಮ ಹಸು, ಎತ್ತು, ಎಮ್ಮೆ, ಕುರಿ, ಮೇಕೆ ಇವುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಸಹಾಯ ಮಾಡುತ್ತದೆ. ಜಾನುವಾರುಗಳನ್ನು ಮಾರಾಟ ಮಾಡಲು ಮತ್ತು ಖರೀದಿಸಲು ಇದು ಸರಳ ಮತ್ತು ಸುಲಭವಾದ ಮಾರ್ಗವಾಗಿದೆ. ಈ ವೇದಿಕೆಯಲ್ಲಿ ಮಾರಾಟಗಾರರು ಹಸು, ಎಮ್ಮೆ, ಮೇಕೆ, ಕುರಿ ಮತ್ತು ಎತ್ತುಗಳ ಮಾಹಿತಿಯನ್ನು ಚಿತ್ರಗಳೊಂದಿಗೆ ಪಶುಸಂತೆ.ಕಾಮ್ ವೇದಿಕೆಯಲ್ಲಿ ಹಂಚಿಕೊಳ್ಳಬೇಕು. ಖರೀದಿದಾರರು ಅವರಿಗೆ ಸೂಕ್ತವೆಂದೆನಿಸುವ ಜಾನುವಾರುಗಳನ್ನು ಹುಡುಕುತ್ತಾರೆ ಮತ್ತು ನೇರವಾಗಿ ಮಾರಾಟಗಾರರಿಗೆ ಕರೆ ಮಾಡುತ್ತಾರೆ. ಜಾನುವಾರು ಮಾರುಕಟ್ಟೆ ಪಶುಸಂತೆ.ಕಾಮ್ ರಾಜ್ಯ ಹಾಗೂ ಪಕ್ಕದ ರಾಜ್ಯಗಳಲ್ಲಿ ಜಾನುವಾರುಗಳನ್ನು ಖರೀದಿಸಲು, ಮಾರಾಟ ಮಾಡಲು ಮತ್ತು ತ್ವರಿತ ವಿಚಾರಣೆಗಳನ್ನು ಪಡೆಯಲು ಗರಿಷ್ಠ ರೈತರನ್ನು ತಲುಪುತ್ತದೆ. ತಜ್ಞರ ತಂಡವು ವೆಬ್‌ಸೈಟ್‌ನ ಮ್ಯಾಚ್‌ಮೇಕಿಂಗ್ ಸೇವೆಯ ಹಿಂದೆ ಇದ್ದು, ಇದು ಜಾನುವಾರು ವ್ಯಾಪಾರವನ್ನು ಹೆಚ್ಚು ಬೆಂಬಲಿಸುತ್ತದೆ.

ನಾವು ಯಾರು ?

ಗ್ಯಾನ್ ವೇದಾಂತ್ ಫೌಂಡೇಶನ್ , ಸಾಮಾಜಿಕ ಸೇವಾ ಸಂಸ್ಥೆ ಆಗಿ 2019 ಸ್ಥಾಪಿತವಾಯಿತು . "ಗ್ಯಾನ್ ವೇದಾಂತ್" ಎಂಬ ಹೆಸರೇ ಸೂಚಿಸುವಂತೆ ನಾವು ಸಾಮಾಜಿಕ ಕಾರಣಗಳ ಹಿತದೃಷ್ಟಿಯಿಂದ ಕೆಲಸ ಮಾಡುತ್ತೇವೆ. ನಮ್ಮ ಧ್ಯೇಯವು ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವುದು, ಮಹಿಳಾ ಸಬಲೀಕರಣ, ಗ್ರಾಮೀಣ ಪ್ರದೇಶಗಳಲ್ಲಿ ಸೌಲಭ್ಯ ವಂಚಿತರಿಗೆ ವೈದ್ಯಕೀಯ ಸೌಲಭ್ಯಗಳನ್ನು ಒದಗಿಸುವುದು, ಹಿಂದುಳಿದವರನ್ನು ಸ್ವಾವಲಂಬಿಗಳನ್ನಾಗಿ ಮಾಡುವಲ್ಲಿ ಶ್ರಮಿಸಿವುದು. ರೈತವರ್ಗಕ್ಕೆ ತಂತ್ರಜ್ಞಾನದಲ್ಲಿ ಉನ್ನತೀಕರಿಸಲು ಶ್ರಮಿಸಿವುದು , ಯುವಕರು ಬಯಸಿದ ಕ್ಷೇತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಲು ನಾವು ಸಹಾಯ ಮಾಡುತ್ತೇವೆ.

ನಾವು ಡಿಜಿಟಲ್ ತಂತಜ್ಞಾನ ವೃತ್ತಿಪರರ ತಂಡಗಳ ಸಹಭಾಗಿತ್ವದಲ್ಲಿ ರೈತರು, ಜಾನುವಾರು ಉದ್ಯಮಿಗಳು , ಸ್ವಯಂ ಉದ್ಯೋಗಿಗಳು, ಯಾವುದೇ ವ್ಯಕ್ತಿ ಜಾನುವಾರುಗಳನ್ನು ಆನ್‌ಲೈನ್‌ನಲ್ಲಿ ಖರೀದಿಸಲು ಮತ್ತು ಮಾರಾಟ ಮಾಡಲು ವೇದಿಕೆಗಳನ್ನು ಅಭಿವೃದ್ಧಿಪಡಿಸಿದ್ದೇವೆ..